ಸಂಸ್ಕೃತ ವನ್ನು ಕನ್ನಡ ದಿಂದ ಕಲಿಯಿರಿ

ಸಹಾಯವಾಣಿ / Support: Call on (+91) 895-101-8628 (call / whatsapp)


ಸಂಸ್ಕೃತ ಸುಭಾಷಿತಗಳು

ಅನ್ನದಾನಂ ಪರಂ ದಾನಂ
ವಿದ್ಯಾಧಾನಮ್ ಅತಃ ಪರಮ್ ।
ಅನ್ನೇನ ಕ್ಷಣಿಕಾ ತೃಪ್ತಿಃ
ಯಾವಜ್ಜೀವಂ ಚ ವಿದ್ಯಯಾ ॥


ಕನ್ನಡ ಅನುವಾದ: ಅನ್ನದಾನವು ಶ್ರೇಷ್ಠವಾದ ದಾನವಾಗಿದೆ, ಆದರೆ ವಿದ್ಯಾ(ಜ್ಞಾನ)ದಾನವು ಅದಕ್ಕಿಂತಲೂ ಮಿಗಿಲಾದುದು. ಅನ್ನ ನೀಡಿದರೆ ಆ ಕ್ಷಣಕ್ಕೆ ಮಾತ್ರ ತೃಪ್ತಿಯಾಗುತ್ತದೆ, ಆದರೆ ಜ್ಞಾನ ನೀಡಿದರೆ ಅದು ಜೀವನ ಪರ್ಯಂತ ಸಹಾಯ ಮಾಡುತ್ತದೆ.

ಪ್ರತಿ ಪದದ ಅರ್ಥ
ಅನ್ನದಾನಂ ಪರಂ ದಾನಂ : ಅನ್ನದಾನವು ಅತ್ಯಂತ ಶ್ರೇಷ್ಠವಾದ ದಾನ.
ವಿದ್ಯಾದಾನಮತಃ ಪರಮ್ : ಆದರೆ ವಿದ್ಯಾದಾನವು ಅದಕ್ಕಿಂತಲೂ ಶ್ರೇಷ್ಠ.
ಅನ್ನೇನ ಕ್ಷಣಿಕಾ ತೃಪ್ತಿಃ : ಅನ್ನದಿಂದ ಸಿಗುವ ತೃಪ್ತಿ ತಾತ್ಕಾಲಿಕ (ಕ್ಷಣಿಕ).
ಯಾವಜ್ಜೀವಂ ಚ ವಿದ್ಯಯಾ : ವಿದ್ಯೆಯಿಂದ ಸಿಗುವ ತೃಪ್ತಿ ಮತ್ತು ಆಸರೆ ಜೀವನ ಪರ್ಯಂತ ಇರುತ್ತದೆ.